ಕಿನ್ನರರು

 ಕಶ್ಯಪಮುನಿಯಿಂದ ಸುರಸೆಯಲ್ಲಿ ಜನಿಸಿದವರು. ಗಂಧರ್ವರ ಗುಂಪಿಗೆ ಸೇರಿದ್ದು ಕುಬೇರನ ಕೈಂಕರ್ಯದಲ್ಲಿರುವವರೆನ್ನಲಾಗಿದೆ. ಗಾಂಧರ್ವರೆನಿಸಿದ ಇವರ ದೇಹ ಮನುಷ್ಯರಂತಿದ್ದು ಮುಖ ಮಾತ್ರ ಕುದುರೆಯಂತಿದೆಯೆಂದು ಹೇಳುತ್ತಾರೆ. ಬಾಣಭಟ್ಟನ ಕಾದಂಬರಿಯಲ್ಲಿ ಚಂದ್ರಾಪೀಡ ಕಿನ್ನರ ಮಿಥುನವೊಂದನ್ನು ಅಟ್ಟಿ ಹೊರಟು ಮಹಾಶ್ವೇತೆಯನ್ನು ಕಂಡ ಸಂದರ್ಭದ ವರ್ಣನೆಯಿದೆ.          

 (ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ